Last update:
Rakshitha Shetty: ರಕ್ಷಿತಾ ಶೆಟ್ಟಿ ಜೊತೆ ದೋಣಿ ಹತ್ತಿ ಏಡಿ ಹಿಡಿಯೋಕೆ ಹೋಗಿದ್ದಾರೆ. ಏಡಿ ಸಿಕ್ತಾ?
ಬಿಗ್ಬಾಸ್ ಸೀಸನ್ 12 (Bigg Boss 12) ಮುಗಿದರೂ ಕೂಡಾ ಸ್ಪರ್ಧಿಗಳು ಪರಸ್ಪರ ಟಚ್ನಲ್ಲಿದ್ದಾರೆ. ಆಗಾಗ ಭೇಟಿಯಾಗುತ್ತಾ, ಜೊತೆಯಾಗಿ ಸಮಯ ಕಳೆಯುತ್ತಾ ಇರುತ್ತಾರೆ. ಅಷ್ಟೇ ಅಲ್ಲದೆ ಬಹುತೇಕ ಎಲ್ಲಾ ಸ್ಪರ್ಧಿಗಳೂ ಶೋ (Social networks) ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ. ಮ್ಯೂಟೆಂಟ್ ರಘು ಕೂಡಾ ಹಾಗೆಯೇ ಮೊದಲು ಜಿಮ್ ಬಗ್ಗೆ ಅಷ್ಟೇ ಪೋಸ್ಟ್ ಹಾಕುತ್ತಿದ್ದ ರಘು ಅವರ ಫೀಡ್ನಲ್ಲಿ ಈಗ ಮಸ್ತ್ ಕಂಟೆಂಟ್ ತುಂಬಿಕೊಂಡಿದೆ.
ರಘು ಹಾಗೂ ರಕ್ಷಿತಾ ಅವರು ಬಿಗ್ಬಾಸ್ ಮನೆಯಲ್ಲಿ ಆಪ್ತರಾಗಿದ್ದರು. ಅಣ್ಣ-ತಂಗಿಯಾಗಿ ಅವರ ನಡುವೆ ಒಳ್ಳೆಯ ಬಾಂಡಿಂಗ್ ಇತ್ತು. ಅಷ್ಟೇ ಅಲ್ಲದೆ ಇಬ್ಬರ ನಡುವೆ ಒಳ್ಳೆಯ ಸಿಂಕಿಂಗ್ ಇತ್ತು. ಅವರು ಸಂಬಂಧ ಶೋ ಮುಗಿದ ನಂತರವೂ ಚೆನ್ನಾಗಿ ಉಳಿದಿದೆ.
ಮ್ಯೂಟೆಂಟ್ ರಘು ಮನೆಯಲ್ಲಿ ರಕ್ಷಿತಾ ಅಡುಗೆ ಮಾಡಿದ್ದು ಅವರಿಬ್ಬರೂ ಫುಡ್ ಎಂಜಾಯ್ ಮಾಡೋದು ಸೇರಿ ಹಲವಾರು ವಿಡಿಯೋ ಕಂಟೆಂಟ್ ಅವರು ಶೇರ್ ಮಾಡಿದ್ದಾರೆ. ಇದೀಗ ಮ್ಯೂಟೆಂಟ್ ರಘು ಅವರು ರಕ್ಷಿತಾ ಊರಿಗೆ ಬಂದಿದ್ದಾರೆ.
ರಕ್ಷಿತಾ ಶೆಟ್ಟಿ ಅವರ ಜೊತೆ ರಘು ಅವರು ಪುಟ್ಟ ದೋಣಿಯನ್ನು ಹತ್ತಿದ್ದಾರೆ. ನದಿಯಲ್ಲಿ ಅವರು ದೋಣಿಯಲ್ಲಿ ಹೋಗಿದ್ದಾರೆ. ಆ ವಿಡಿಯೋವನ್ನು ಮ್ಯೂಟೆಂಟ್ ರಘು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಂದಹಾಗೆ ಕರಾವಳಿ ಹುಡುಗಿ ರಕ್ಷಿತಾಗೆ ಏಡಿ, ಸಿಗಡಿ, ಮೀನು ಯಾವುದೂ ಹೊಸದಲ್ಲ. ಅವೆಲ್ಲವೂ ಅವರಿಗೆ ಇಷ್ಟ. ಈಗ ರಘು ಅವರು ರಕ್ಷಿತಾ ಜೊತೆ ದೋಣಿ ಹತ್ತಿ ಏಡಿ ಹಿಡಿಯೋಕೆ ಹೋಗಿದ್ದಾರೆ. ಏಡಿ ಎಂದರೆ ಕ್ರ್ಯಾಬ್. ಇಬ್ಬರೂ ದೋಣಿಯಲ್ಲಿ ಹೋಗುವಾ ವಿಡಿಯೋವನ್ನು ರಘು ಶೇರ್ ಮಾಡಿದ್ದು ಅವರಿಗೆ ಏಡಿಗಳು ಕೂಡಾ ಸಿಕ್ಕಿದೆ.
ರಘು ಅವರು ಮ್ಯೂಟೆಂಟ್ ಚೆಫ್ ಎನ್ನು ಅಡುಗೆ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು ಅದರಲ್ಲಿ ಚಂದ ಚಂದದ ರೆಸಿಪಿಗಳನ್ನು ಶೇರ್ ಮಾಡುತ್ತಾರೆ. ರಕ್ಷಿತಾ ಅವರು ಕುಡಾ ರಘು ಅವರ ಕೈರುಚಿ ಸವಿದಿದ್ದು ಅದರ ವಿಡಿಯೋ ಕೂಡಾ ಅವರು ಈ ಹಿಂದೆ ಶೇರ್ ಮಾಡಿಕೊಂಡಿದ್ದರು.
Bengaluru [Bangalore],Bangalore,Karnataka
