Headlines

ಅಣ್ಣಾಮಲೈ ಹೊಸ ಪಕ್ಷ?,ಬಿಜೆಪಿಗೆ ಅಣ್ಣಾಮಲೈ ಗುಡ್ ಬೈ: ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ: ಮುಂದಿನ ನಡೆ ಏನು? – annamalai goodbye to bjp resigns from primary membership what is the next step? & more related news here

ಅಣ್ಣಾಮಲೈ ಹೊಸ ಪಕ್ಷ?,ಬಿಜೆಪಿಗೆ ಅಣ್ಣಾಮಲೈ ಗುಡ್ ಬೈ: ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ: ಮುಂದಿನ ನಡೆ ಏನು? – annamalai goodbye to bjp resigns from primary membership what is the next step?

 & more related news here


ಅಣ್ಣಾಮಲೈ ಅವರನ್ನು ಸೈಡ್‌ಲೈನ್‌ ಮಾಡಿ, ತಮಿಳುನಾಡು ಚುನಾವಣೆ ನಡೆಸಿದ ಬಳಿಕ ಬೇಸರಗೊಂಡ ಅಣ್ಣಾಮಲೈ ಕಡೆಗೂ ಬಿಜೆಪಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದು, ಸಂಜೆ 4 ಗಮಟೆಗೆ ಅಮಿತ್‌ ಶಾ ರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಹೈಲೈಟ್ಸ್‌:

  • ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಪಕ್ಷಕ್ಕೆ ರಾಜೀನಾಮೆ ಸಲ್ಲಿಕೆ
  • ಶೀಘ್ರದಲ್ಲಿ ಹೊಸ ಪಕ್ಷ ರಚನೆ ಸಾಧ್ಯತೆ
  • ಬಿಜೆಪಿ ಮುಖಂಡರ ಮನವೊಲಿಕೆಗೂ ಬಗ್ಗದ ಅಣ್ಣಾಮಲೈ ರಾಜೀನಾಮೆ
ಅಣ್ಣಾಮಲೈ ರಾಜೀನಾಮೆ
(ಗ್ಯಾಲರಿAgencies)
ಹೊಸದಿಲ್ಲಿ: ತಮಿಳುನಾಡು ರಾಜ್ಯದ ಬಿಜೆಪಿ ಮುಖ್ಯಸ್ಥರಾಗಿದ್ದ ಕೆ ಅಣ್ಣಾಮಲೈ ಬಿಜೆಪಿಯನ್ನು ತೊರೆಯಲು ನಿರ್ಧರಿಸಿ, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್ ರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಆ ಮೂಲಕ ವರಿಷ್ಠರ ಮನವೊಲಿಕೆ ವಿಫಲವಾಗಿದೆ. ರಾಜ್ಯಸಭಾ ಸ್ಥಾನವನ್ನೂ ನಿರಾಕರಿಸಿ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಜೂನ್ 4 ಕ್ಕೆ ಅವರ ಹಟ್ಟುಹಬ್ಬ ಇದ್ದು, ಅಂದೆ ಮುಂದಿನ ನಿರ್ಧಾರ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಪ್ರಾದೇಶಿಕವಾಗಿ ಅಹಿಂದ ಮಾದರಿಯಲ್ಲಿ ಹೊಸ ಪಕ್ಷ ಕಟ್ಟುವ ಸಾಧ್ಯತೆ ಇದೆ. ಐದು ಪುಟಗಳ ಪತ್ರ ಬರೆದಿದ್ದ ಅವರು, ಇಂದು ಬೆಳಿಗ್ಗೆ (ಜೂನ್ 2) ರಾಜೀನಾಮೆ ಘೋಷಿಸಿದ್ದಾರೆ. ತಮಿಳುನಾಡು ಚುನಾವಣಾ ರಿಸಲ್ಟ್ ನಿಂದ ಅಸಮಾಧಾನಗೊಂಡಿದ್ದ ಅಣ್ಣಾಮಲೈ ರಾಜೀನಾಮೆ ಸಲ್ಲಿಸಿದ್ದಾರೆ.

ನಟ ವಿಜಯ್ ಸರಕಾರ ರಚನೆಯೊಂದಿಗೆ ಭಾರಿ ಬದಲಾವಣೆ ಕಂಡುಕೊಂಡಿದ್ದ ತಮಿಳುನಾಡಲ್ಲಿ ಇದೀಗ ಅಣ್ಣಾಮಲೈ ರಾಜೀನಾಮೆಯೂ ದೊಡ್ಡ ಸುದ್ದಿಯಾಗಿದೆ. ಇದರೊಂದಿಗೆ ಸ್ವಂತ ರಾಜಕೀಯ ಸಂಘಟನೆ ಮಾಡಿ, ಹೊಸ ಬಲಪಂಥೀಯ ಮಾದರಿಯಲ್ಲೆ ಪಕ್ಷ ಕಟ್ಟಲು ಮುಂದಾಗಿದ್ದಾರೆ, ಈ ಬಗ್ಗೆ ಹುಟ್ಟುಹಬ್ಬದ ದಿನ ಘೋಷಿಸುವ ಸಾಧ್ಯತೆ ಇದೆ. “ಜನ ಚಳುವಳಿಯನ್ನ” ಆರಂಭಿಸಿ, ಇದಕ್ಕೆ ರಜನೀಕಾಂತ್ ಬೆಂಬಲವನ್ನೂ ಪಡೆಯಲಿದ್ದಾರೆ ಎನ್ನಲಾಗಿದೆ.

ಕರ್ನಾಟಕದಲ್ಲಾ See More ಅಣ್ಣಾಮಲೈ ವೃತ್ತಿಗೆ 2020 ರಲ್ಲಿ ರಾಜಕೀಯ ಪ್ರವೇಶಿಸಿದ್ದರು. 2021 ನೇಮಕಗೊಂಡಿದ್ದರು. ಆರಁ ಮೈತ್ರಿ ನಡೆಸಬಾರದೆಂದು ಒತ್ತಾಯಿಸಿದ್ದರು. ತಮಿಳುನಾಡಲ್ಲಿ ಎನ್‌ ಮಣ್ಣ್ ಎನ್ ಮಕ್ಕಳ್ (ನನ್ನ ಮಣ್ಣು-ನನ್ನ ಜನ ) ಎಂಬ ಪಾದಯಾತ್ರೆ ಮೂಲಕ ಬಿಜೆಪಿಯ ಪ್ರಚಾರ ಹೆಚ್ಚಿಸಿದ್ದರು. ತಮಿಳುನಾಡಲ್ಲಿ ಬಿಜೆಪಿ ಅಸ್ತಿತ್ವ ಹೆಚ್ಚಿಸಿದರೂ, ಚುನಾವಣೆಯಲ್ಲಿ ಬದಲಾವಣೆ ತರಲು ಸಾಧ್ಯವಾಗಿಲ್ಲ.

ಎಐಎಡಿಎಂಕೆ ಪಕ್ಷದ ನಾಯಕ ಪಳನಿಸ್ವಾಮಿ ಜೊತೆ ನಿರಂತರ ಸಂಘರ್ಷಕ್ಕಿಳಿದ ಪರಿಣಾಮ ಎನ್‌ಡಿಎ ಜೊತೆ ಬಿರುಕು ಮೂಡಿತು ಎಂಬ ಕಾರಣಕ್ಕೆ ಅಣ್ಣಾಮಲೈ ಅವರನ್ನು ಸೈಡ್‌ಲೈನ್ ಮಾಡಲಾಗಿತ್ತು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ತಮ್ಮ ತಂದೆಯ ಅನಾರೋಗ್ಯದ ಕಾರಣ ನೀಡಿ ಚುನಾವಣಾ ಉಸ್ತುವಾರಿಯಿಂದ ಹಿಂದೆ ಸರಿದಿದ್ದರು ಮತ್ತು ಸ್ಪರ್ಧಿಸಲು ನಿರಾಕರಿಸಿದ್ದರು.

ಮುಂದಿನ ನಡೆ?

ಐಪಿಎಸ್ ಅಧಿಕಾರಿಯಾಗಿ ರಾಜೀನಾಮೆ ಸಲ್ಲಿಕೆ ಮಾಡಿದಾಗಲೇ ನಟ ರಜನೀಕಾಂತ್ ಅವರನ್ನು ಭೇಟಿ ಮಾಡಿ ಅವರ ಪಕ್ಷ ಸೇರುವ ಆಸೆ ವ್ಯಕ್ತಪಡಿಸಿದ್ದರು, ಆದರೆ ರಜನಿಕಾಂತ್ ಪಕ್ಷ ಆರಂಭಿಸಿರಲಿಲ್ಲ. ಈಗ ಹೊಸ ನಡೆ ಏನಿರಬಹುದು ಎಂಬ ಕುತೂಹಲ ಮೂಡಿದೆ. ಅಣ್ಣಾ ಮಲೈ ಬೆಂಬಲಿಗರು ಮಧುರೈ ನಲ್ಲಿ ಪೋಸ್ಟರ್ “ಗಳನ್ನು ಅಂಟಿಸಿದ್ದು,” “ಮುಂದಿನ ಅವತಾರ” ಎಂದೆಲ್ಲಾ ಹಂಚಿದ್ದಾರೆ‌

ಸೌಮ್ಯಶ್ರೀ ಮಾರ್ನಾಡ್

ಲೇಖಕರ ಬಗ್ಗೆಸೌಮ್ಯಶ್ರೀ ಮಾರ್ನಾಡ್ಲೇಖಕರ ಪರಿಚಯ : ಸೌಮ್ಯಶ್ರೀ ಮಾರ್ನಾಡ್ ಇವರು ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ 10 ವರಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಟೈಮ್ಸ್‌ ಇಂಟರ್‌ನೆಟ್‌ ಸಂಸ್ಥೆಯ ವಿಜಯ ಕರ್ನಾಟಕ May 2022. ದಿನನಿತ್ಯದ ಪ್ರಮುಖ ಸುದ್ದಿಗಳು, ರಾಜಕೀಯ ಬೆಳವಣಿಗೆಗಳು, ಸಾಧಕರ ಸಂದರ್ಶನಗಳು, ರಾಜಧಾನಿ ಬೆಂಗಳೂರಿನ ಕುತೂಹಲದ ವಿಷಯಗಳ ವಿಡಿಯೋ ಸಹಿತ ವರದಿ ಇವರ ಕಾರ್ಯವ್ಯಾಪ್ತಿಯಾಗಿದೆ. ವೃತ್ತಿಜೀವನ : ವಿಜಯ ಕರ್ನಾಟಕ ಡಿಜಿಟಲ್‌ ವೆಬ್‌ಸೈಟ್‌ನೊಂದಿಗೆ, ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನೆಲ್‌ಗೂ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಕ್ಷೇತ್ರಗಳ ಸಾಧಕಿಯರ ಪರಿಚಯದ “ವಿಮೆನ್ ಅಚೀವರ್ಸ್‌” ಹಾಗೂ “ಬೆಂಗಳೂರು ಸೀಕ್ರೆಟ್” ಎಂಬ ವಿಡಿಯೋ ಸರಣಿಯನ್ನು ಮಾಡುತ್ತಿದ್ದಾರೆ. 2015ಟಿವಿ ಕನ್ನಡದಲ್ಲಿ ವರದಿಗಾರ್ತಿಯಾಗಿ- ನಿರೂಪಕಿಯಾಗಿ ಕೆಲಸ ಆರಂಭಿಸಿದರು. ಬಿಬಿಎಂಪಿ (ಈಗಿನ ಜಿಬಿಎ) ಬೀಟ್‌ಗೆ ಸಂಬಂಧಿಸಿದಂತೆ ವರಿದಿಗಾರಿಕೆ ಮಾಡಿದ 7 ವರ್ಷದ ಅನುಭವ ಇದೆ. ಕರಾವಳಿಯ ಕಲೆಯಾದ ಯಕ್ಷಗಾನದ ಘ ಸಂದರ್ಶನಗಳ 50 ಎಪಿಸೋಡ್‌ಗಳನ್ನು “ಯಕ್ಷರಂಗ” ಕಾರ್ಯಕ್ರಮ ಮಾಡಿದ್ದಾರೆ. ನಂತರ “ಈ ಟಿವಿ ಭಾರತ್” ವೆಬ್‌ಸೈಟ್‌ಗೆ ಮೊದಲ ಬಾರಿಗೆ ಮೋಜೋ (ಮೊಬೈಲ್‌ ಜರ್ನಲಿಸಂ) ಮೂಲಕ ಕೆಲಸ ಮಾಡಿ, ಅನೇಕ ನಾಗರಿಕ ಸಮಸ್ಯೆಗಳನ್ನು ವರದಿ ಮಾಡಿ, ಸ್ಥಳೀಯಾಡಳಿತದ ಗಮನ ಸೆಳೆದು ಪರಿಹಾರ ಕಲ್ಪಿಸುವ ಮೂಲಕ -ಇಂಪ್ಯಾಕ್ಟ್‌ ವರದಿಗಳನ್ನು ಮಾಡಿದ್ದಾರೆ. ಇಸ್ರೋ- ಸೈನ್ಸ್‌ ಮೇಳಗಳು, ಏರ್‌ಶೋ ಗಳನ್ನು ವರದಿ ಮಾಡಿದ ಅನುಭವ ಇವೆ. ಝೀ ಕನ್ನಡ ನ್ಯೂಸ್‌ ಯೂಟ್ಯೂಬ್‌ ನಲ್ಲಿಯೂ ಅನೇಕ ಚರ್ಚಾ ವಿಷಯಗಳನ್ನು ವಿಷಯ ತಜ್ಞರ ಬಳಿ ಡಿಬೇಟ್ ನಡೆಸಿದ ಅನುಭವ ಇದೆ. ಊರು-ವಿದ್ಯಾಭ್ಯಾಸ : ಹುಟ್ಟಿದ ಊರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಬಳಿ ಪಡುಮಾರ್ನಾಡಿನ ಕೃಷಿ ಪ್ರಧಾನ ಕುಟುಂಬದಿಂದ ಬಂದವರು. ಪಿಯು ಶಿಕ್ಷಣ ಆಳ್ವಾಸ್‌ನಲ್ಲಿ , ನಂತರ ಬೆಂಗಳೂರಿನ ” ಪದವಿ ಹಾಗೂ ಮೈಸೂರು ಓಪನ್ ಯುನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. English 13 days, 3 days, 3 days “” ಪಡೆದಿದ್ದಾರೆ. ಯಕ್ಷಗಾನದ ಬಡಗು ತಿಟ್ಟು-ತೆಂಕು ತಿಟ್ಟು ಅಭ್ಯಸಿಸಿ ಹಲವಾರು ಪಾತ್ರಗಳನ್ನು ಮಾಡಿದ್ದಾರೆ. ಬೆಲ್‌ ಬಾಟಂ, ಬನಾರಸ್‌, ಬ್ಲಿಂಕ್ ಸಿನಿಮಾಗಳಲ್ಲಿ ನಟಿಸಿದ ಅನುಭವ ಇದೆ. ವಿಜ್ಞಾನದ ಕುರಿತಾದ ಮಾಹಿತಿಗಾಗಿ ವಿಜ್ಞಾನಿ ಅನಂತರಾಮು, ಪರಿಸರ ತಜ್ಞರಾಗಿ ಯಲ್ಲಪ್ಪ ರೆಡ್ಡಿ, ಹೊಳ್ಳ, ಬೆಂಖ ಶ್ರೀನಿವಾಸ್ ಅಲವಿಲ್ಲಿ, ಮೊದಲಾದ ಕ್ಷೇತ್ರ ತಜ್ಞರು ಅಮೂಲ್ಯ ಮಾಹಿತಿಗಳನ್ನು ಒಳಗೊಂಡ ವರದಿಗಳು ಪ್ರಕಟಿಸಲಾಗಿದೆ.ಇನ್ನಷ್ಟು ಓದಿ