Doddanna: ‘ಮಲಗಿ ಏಳೋ ಮೊದಲು ನಿಧನ ಅಂತಿದ್ದಾರೆ’ ಕೊಟ್ಟ ದೊಡ್ಡಣ್ಣ | & more related news here

Doddanna: ‘ಮಲಗಿ ಏಳೋ ಮೊದಲು ನಿಧನ ಅಂತಿದ್ದಾರೆ’ ಕೊಟ್ಟ ದೊಡ್ಡಣ್ಣ |

 & more related news here


Last update:

Doddanna: ಹರಿದಾಡುತ್ತಿರುವ ಸುದ್ದಿ ಬಗ್ಗೆ ಈಗ ಕ್ಲಾರಿಟಿ ಕೊಟ್ಟಿದ್ದಾರೆ.

ದೊಡ್ಡಣ್ಣ
ದೊಡ್ಡಣ್ಣ

ಕನ್ನಡ ಚಿತ್ರರಂಗದ (Sandalwood) ಹಿರಿಯ ನಟ, ಕನ್ನಡಿಗರ (Doddanna) ಆಗಾಗ ಸುಳ್ಳು ಸುದ್ದಿ ಹರಿದಾಡುತ್ತಲೇ ಇರುತ್ತವೆ. ಇದೀಗ ಅವರ ಕುರಿತು ಮತ್ತೊಮ್ಮೆ ಅಂಥದ್ದೇ ಸುದ್ದಿ ಹರಿದಾಡಿದ್ದು, ನಾನು ಬದುಕಿದ್ದೀನಿ ನಾನು ನಿಧನವಾಗಿಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ತಮ್ಮ ನಿಧನ ಸುದ್ದಿ ಬಗ್ಗೆ ಕ್ಲಾರಿಟಿ ಕೊಟ್ಟ ದೊಡ್ಡಣ್ಣ ಅವರು ನಾನು ಮಲಗಿ ಎದ್ದೇಳೋಕೂ ಮುನ್ನ ಅವಿವೇಕಿಗಳು ನಾನು ನಿಧನ ಅಗಿದ್ದೀನಿ ಅಂತ ಫೇಕ್ ನ್ಯೂಸ್ ನಲ್ಲಿ ಹಾಕಿದ್ದಾರೆ. ನಾನು ನಿಧನವಾಗಿದ್ದೀನಿ ಅನ್ನೋದು ಶುದ್ದ ಸುಳ್ಳು ಎಂದಿದ್ದಾರೆ.

ನಾನು ಅರೋಗ್ಯವಾಗಿದ್ದೀನಿ. ನೆಮ್ಮದಿಯಾಗಿದ್ದೀನಿ. ಬೆಳಗ್ಗೆಯಿಂದ ನನಗೆ ಮುಖ ತೊಳೆಯೋಕೆ ಆಗ್ತಿಲ್ಲ, ಅಷ್ಟು ಕರೆಗಳು ಬರ್ತಿವೆ. ಈ ವಿವರ ನಿಮ್ಮ‌ಜೊತೆ ಹೇಳಬೇಕು ಅಂತ ವಿಡಿಯೋ ಮಾಡಿದ್ದೀನಿ ಎಂದು ನಟ ಹೇಳಿದ್ದಾರೆ.

2021 ಸುಳ್ಳು ಸುದ್ದಿ ಹರಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ ದೊಡ್ಡಣ್ಣ ಅವರ ಕುರಿತು ಸುಳ್ಳು ಸುದ್ದಿ ಹಬ್ಬಿತ್ತು. ನಟ ದೊಡ್ಡಣ್ಣ ಇನ್ನಿಲ್ಲ ಎಂಬಂತೆ ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋ ಶೇರ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಫೇಕ್ ಪೋಸ್ಟ್ ವೈರಲ್ ಆಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ವರದಿ: ಸತೀಶ್ ಕನಕಪುರ, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *