ಸುಡುವ ಬಿಸಿಲು ಮತ್ತು ಅನಿಶ್ಚಿತ ಮಳೆಯಿಂದ ಬಸವಳಿಯುತ್ತಿದೆ ಬದುಕು & more related news here

ಸುಡುವ ಬಿಸಿಲು ಮತ್ತು ಅನಿಶ್ಚಿತ ಮಳೆಯಿಂದ ಬಸವಳಿಯುತ್ತಿದೆ ಬದುಕು

 & more related news here


ಹಿಂದೆ ಕನ್ನಡಿಗರಾದ ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಒಂದು ಮಾತಿತ್ತು. ನಮ್ಮ ರಾಜ್ಯದ ಹವಾಮಾನವು ಸಮತೋಲಿತವಾಗಿದೆ ಉತ್ತರ ಭಾರತದಂತೆ ಅತಿಯಾದ ಸುಢ ವಿದೇಶಗಳಂತೆ ಕೊರೆಯುವ ಚಳಿಯೂ ಇಲ್ಲ. ನಮ್ಮ ಪಶ್ಚಿಮ ಘಟ್ಟಗಳ ಹಸಿರು ಮತ್ತು ಮಲೆನಾಡಿನ ತಂಪಾದ ಮಳೆ ಕರ್ನಾಟಕವನ್ನು ಒಂದು ನೈಸರ್ಗಿಕ ಸ್ವರ್ಗವಾಗಿಸಿತ್ತು. ಆದರೆ ಇಂದು ಆ ಸಮತೋಲನವು ಎಲ್ಲೋ ಕಳೆದುಹೋದಂತೆ ಕಾಣುತ್ತಿದೆ. 2026ರ ಮಾರ್ಚ್- ಎಪ್ರಿಲ್ ತಿಂಗಳಲ್ಲಿ ನಾವು ಅನುಭವಿಸುತ್ತಿರುವ ಹವಾಮಾನವು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕಳವಳಕಾರಿಯಾಗಿದೆ.

ಬದಲಾಗುತ್ತಿರುವ ಉಷ್ಣಾಂಶದ ನಕ್ಷೆ

ಕಲಬುರಗಿ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಉಷ್ಣಾಂಶವು 43 sec ‘ ‘ ಬೆಂಗಳೂರಿನಲ್ಲಿ ತಾಪಮಾನ 38 ಡಿಗ್ರಿ ಮೀರುತ್ತಿದೆ. ಹವಾಮಾನ ಇಲಾಖೆಯು ಸತತವಾಗಿ ‘ಬಿಸಿಗಾಳಿ’ (Heat wave) ಎಚ್ಚರಿಕೆಗಳನ್ನು ನೀಡುತ್ತಿದೆ. ; ಕೆಲವೇ ಗಂಟೆಗಳಲ್ಲಿ ನಗರಗಳನ್ನು ಮುಳುಗಿಸುವ ಮೇಘಸ್ಫೋಟ ಕೊಡಗು-ಕೇರಳದ ವಯನಾಡ್ ಹಾಗೂ ಮಲೆನಾಡಿನಲ್ಲಿ ಸಂಭವಿಸುತ್ತಿರುವ ಭೂಕುಸಿತಗಳು ಆತಂಕ ಸೃಷ್ಟಿಸಿವೆ.

ಜಾಗತಿಕ ವಿದ್ಯಮಾನ: ಏನಿದು ‘ಎಲ್ ನಿನೋ’?

ಈ ಬಾರಿಯ ಅತಿಯಾದ ಬಿಸಿಲು ಮತ್ತು ಮಳೆಯ ಏರುಪೇರಿಗೆ ” ಪ್ರಮುಖ ಕಾರಣವಾಗಿದೆ.

ಪೆಸಿಫಿಕ್ ಸಾಗರದ ಸಮಭಾಜಕ ವೃತ್ತದ ಪ್ರದೇಶದಲ್ಲಿ ಸಮುದ್ರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಅತಿಯಾಗಿ ಬಿಸಿಯಾಗುವುದನ್ನು ‘ಎಲ್ ನಿನೋ’ ಎನ್ನಲಾಗುತ್ತದೆ. ಇದು ಪ್ರತೀ 2ರಿಂದ 7 ವರ್ಷಗಳಿಗೊಮ್ಮೆ ಸಂಭವಿಸುವ ಪ್ರಕ್ರಿಯೆ.

ಭಾರತದ ಮೇಲೆ ಪ್ರಭಾವ: ಸಮುದ್ರದ ಈ ಉಷ್ಣತೆಯು ಜಾಗತಿಕ ಗಾಳಿಯ ದಿಕ್ಕನ್ನು ಬದಲಿಸುತ್ತದೆ. ಇದರ ನೇರ ಪರಿಣಾಮವಾಗಿ ಭಾರತಕ್ಕೆ ಮಳೆ ತರುವ ಮುಂಗಾರು ಮಾರುತಗಳು ದುರ್ಬಲಗೊಳ್ಳುತ್ತವೆ. ಇದಱ ವಾಡಿಕೆಗಿಂತ ಕಡಿಮೆ ಮಳೆಯಾಗುವುದು ಮತ್ತು ಬೇಸಿಗೆಯಲ್ಲಿ ತಾಪಮಾನವು ದಾಖಲೆ ಮಟ್ಟಕ್ಕೆ ಏರುವುದು ಕಂಡುಬರುತ್ತದೆ. ಈ ವರ್ಷದ ಬಿಸಿಗಾಳಿಗೆ ಈ ಜಾಗತಿಕ ವಿದ್ಯಮಾನವೂ ಒಂದು ದೊಡ್ಡ ಕಾರಣ.

Description: ಕಾಂಕ್ರಿಟ್ ಕಟ್ಟಡಗಳು ಮತ್ತು ಡಾಂಬರು ರಸ್ತೆಗಳು ಹೆಚ್ಚಾಗಿ ‘ಅರ್ಬನ್ ಹೀಟ್ ಐಲ್ಯಾಂಡ್ ‘ ಸೃಷ್ಟಿಸುತ್ತಿವೆ. ಇವು ಹಗಲಿನಲ್ಲಿ ಶಾಖವನ್ನು ಹೀಱ ರಾತ್ರಿಯಲ್ಲಿ ಬಿಡುಗಡೆ ಮಾಡುತ್ತವೆ.

Where are you?

ನಮ್ಮ ಹವಾಮಾನದ ರಕ್ಷಾಕವಚ ಎಂದರೆ ಅದು ಪಶ್ಚಿಮ ಘಟ್ಟಗಳು. ಅರಬಿ ಸಮುದ್ರದಿಂದ ತೇವಾಂಶ ಹೊತ್ತು ಬರುವ ಮುಂಗಾರು ಮಾರುತಗಳನ್ನು ಈ ಘಟ್ಟಗಳು ತಡೆದು ಮಳೆ ಸುರಿಸುತ್ತವೆ. ಆದರೆ ಈಗ ಅರಬಿ ಸಮುದ್ರದ ಉಷ್ಣತೆ ‘ಕನ್ವೆಕ್ಟಿವ್ ಮೋಡಗಳು’ ವೇಗವಾಗಿ ರೂಪುಗೊಳ್ಳುತ್ತಿವೆ. ಇದರಿಂದಾಗಿ ಒಂದು ತಿಂಗಳಲ್ಲಿ ಸುರಿಯಬೇಕಾದ ಮಳೆ ಕೇವಲ 2-3 ಗಂಟೆಗಳಲ್ಲಿ ಸುರಿಯುತ್ತಿದೆ. ‘ಇದನ್ನು ‘ಮೇಘಸ್ಫೋಟ’ ಕ್ಲೌಡ್ ಬರ್ಸ್ಟ್’ ಎನ್ನುತ್ತಾರೆ.

ಬಿಸಿಲನ್ನು ಎದುರಿಸಲು ಬೇಕಾದ ಆಹಾರ ಶೈಲಿ ಪ್ರಕೃತಿಯ ಬದಲಾವಣೆಗೆ ತಕ್ಕಂತೆ ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ.

ಡಿಹೈಡ್ರೇಶನ್

ಸರಳವಾಗಿ ಹೇಳುವುದಾದರೆ, ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದ ನೀರು ಲಭ್ಯವಿಲ್ಲದ ಸ್ಥಿತಿಯೇ ಡಿಹೈಡ್ರೇಶನ್. ಅಂದರೆ ನಾವು ಕುಡಿಯುವ ನೀರಿಗಿಂತ, ಬೆವರು ಅಥವಾ ಮೂತ್ರದ ಮೂಲಕ ದೇಹದಿಂದ ಹೊರಹೋಗುವ ನೀರಿನ ಪ್ರಮಾಣ ಹೆಚ್ಚಾದಾಗ ಈ ಸಮಸ್ಯೆ ಉಂಟಾಗುತ್ತದೆ.

ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಬೇಕು. ಎಳನೀರು, ಮಜ್ಜಿಗೆ ಮತ್ತು ನಿಂಬೆ ಹಣ್ಣಿನ ಶರಬತ್ತು ದೇಹದ ಲವಣಾಂಶವನ್ನು ಕಾಪಾಡುತ್ತವೆ. ಸಕ್ಕರೆ ಮಿಶ್ರಿತ ತಂಪು ಪಾನೀಯಗಳು ಮತ್ತು ಅತಿಯಾದ ಕಾಫಿ-ಚಹಾ ಸೇವನೆಯಿಂದ ದೂರವಿರಬೇಕು.

ಆಹಾರ ಕ್ರಮ: ಮಧ್ಯಾಹ್ನದ ಸಮಯದಲ್ಲಿ ಅತಿಯಾದ ಮಸಾಲೆ ಅಥವಾ ಎಣ್ಣೆ ಪದಾರ್ಥಗಳ ಬದಲು ಗಂಜಿ, ಮೊಸರನ್ನ, ಸೌತೆಕಾಯಿ, ಕಲ್ಲಂಗಡಿ ಮತ್ತು ಹಸಿರು ಸೊಪ್ಪುಗಳಂತಹ ಲಘು ಆಹಾರ ಸೇವಿಸುವುದು ಉತ್ತಮ. ಇವು ದೇಹವನ್ನು ತಂಪಾಗಿಡಲು ಸಹಕಾರಿ.

ಮಧ್ಯಾಹ್ನ 12ರಿಂದ 4ಗಂಟೆಯವರೆಗೆನೇರ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ. ಅನಿವಾರ್ಯವಾದಲ್ಲಿ ಬಿಳಿ ಅಥವಾ ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ಕೊಡೆ ಅಥವಾ ಟೋಪಿಯನ್ನು ಬಳಸಿ.

ಬಿಸಿಲು ಮುಡುವ ಅನುಭವವೇಕೆ?

ಈಗಿನ ಬೇಸಿಗೆಯ ತಾಪಮಾನಕ್ಕೆ ಎರಡು ಪ್ರಮುಖ ಕಾರಣಗಳಿವೆ: ಆರ್ದ್ರತೆ (humidity) ಮತ್ತು ‘ಫೀಲ್ಸ್ ಲೈಕ್’ (feels like) ಉಷ್ಣತೆ. ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಉಷ್ಣಾಂಶಕ್ಕಿಂತ ಹೆಚ್ಚಾಗಿ ಕಾಡುವುದು ಈ ಆರ್ದ್ರತೆ. (humidity) ಉಷ್ಣತೆಯನ್ನು ಹೊರಹಾಕಲು ಪ್ರಕೃತಿ ನೀಡಿರುವ ‘ಬೆವರುವಿಕೆ’ ಸರಿಯಾಗಿ ನಡೆಯುವುದಿಲ್ಲ. ಬೆವರು ಆವಿಯಾಗದಿದ್ದಾಗ ದೇಹದ ಒಳಗಿನ ಉಷ್ಣತೆ ಹೊರಹೋಗದೆ ನಮಗೆ ಅತಿಯಾದ ಸುಸ್ತು ಮತ್ತು ಉಸಿರುಗಟ್ಟುವಿಕೆ ಉಂಟಾಗುತ್ತದೆ. ಹವಾಮಾನ ವರದಿ 35 ಡಿಗ್ರಿ ತೋರಿಸಿದರೂ ನಮಗೆ 42 ಡಿಗ್ರಿಯಷ್ಟು ಬಿಸಿಲು ಭಾಸವಾಗಲು ಇದೇ ಕಾರಣ.

ನಮ್ಮ ಮುಂದಿರುವ ಹಾದಿ

ಹವಾಮಾನ ತಜ್ಞರ ಪ್ರಕಾರ, ಮುಂದಿನ ವರ್ಷಗಳಲ್ಲಿ ಕರ್ನಾಟಕವು ದೀರ್ಘಕಾಲದ ಬರಗಾಲ ಮತ್ತು ಹಠಾತ್ ” ಏಕಕಾಲಕ್ಕೆ ಎದುರಿಸಬೇಕಾಗುತ್ತದೆ. ಅವೈಜ್ಞಾನಿಕ ನಗರೀಕರಣ, ಕೆರೆಗಳ ಒತ್ತುವರಿ ಮತ್ತು ಪಶ್ಚಿಮ ಘಟ್ಟಗಳ ನಾಶವನ್ನು ನಾವು ಈಗಲೇ ತಡೆಗಟ್ಟದಿದ್ದರೆ, ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರವನ್ನು ನೀಡುವುದು ಅಸಾಧ್ಯವಾಗಬಹುದು.

ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವುದು ಯ ನಮ್ಮ ಪರಿಸರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ.



Source link

Leave a Reply

Your email address will not be published. Required fields are marked *